ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು
ಜಿಲ್ಲೆ

ಡಾ.ಚೆನ್ನಬಸವ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ

ಬರಹ: ಎಂ. ಎನ್. ನದಾಫ್1 ನಿಮಿಷ ಓದು
ಡಾ.ಚೆನ್ನಬಸವ ಶ್ರೀಗಳು

ನ.7 ರಂದು ಬೆಳಿಗ್ಗೆ 10 ಗಂಟೆಗೆ

ಜಮಖಂಡಿ: ನಗರದ ಐತಿಹಾಸಿಕ ಓಲೆಮಠದ ಲಿಂಗೈಕ್ಯ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ನ.7 ರಂದು ಬೆಳಿಗ್ಗೆ 10 ಗಂಟೆಗೆ ಓಲೆಮಠದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಡಾ.ಚೆನ್ನಬಸವ ಶ್ರೀಗಳ ನಂತರ ಶ್ರೀಮಠದ ಕರ್ಣಧಾರತ್ವ ವಹಿಸಿಕೊಂಡಿರುವ ಆನಂದ ದೇವರು ಶ್ರೀಗಳ ನಿರಂಜನ ಚರಪಟ್ಟಾಧಿಕಾರ ದಿನಾಂಕ ಘೋಷಣೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.

ಗದುಗಿನ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಾಗೂ ನಾಡಿನ ಹರ-ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ, ಸರ್ವ ರಾಜಕೀಯ ಧುರೀಣರು, ಸರ್ವ ಸಮಾಜಗಳ ಗುರು-ಹಿರಿಯರ ಉಪಸ್ಥಿತಿಯಲ್ಲಿ ಸಮಾರಂಭ ಜರುಗಲಿದೆ.

ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳವರ ಪೀಠಾಧಿಕಾರದ ಅವಧಿ ಸುವರ್ಣಯುಗವಾಗಿತ್ತು. ಕಲೆ, ಸಂಗೀತ, ಸಾಹಿತ್ಯದ ಮೂಲಕ ಓಲೆಮಠದ ಕೀರ್ತಿಯನ್ನು ಕರುನಾಡಿನಾಚೆಗೂ ಪಸರಿಸಿದ ಸಾಹಿತ್ಯ ತಪಸ್ವಿಗಳು. ಕನ್ನಡ ಸಿರಿದೇವಿಗೆ 87 ಕೃತಿಗಳನ್ನು ಸಮರ್ಪಿಸಿದ ಸಾಹಿತ್ಯ ಸಂತರು.

ಪೂಜ್ಯರ ನಂತರ ಆನಂದ ದೇವರು ಶ್ರೀಗಳು ಶ್ರೀಮಠವನ್ನು ವಿಸ್ತಾರೋನ್ನತವಾಗಿ ಬೆಳೆಸುತ್ತಿದ್ದಾರೆ. ಜನಜಾಗೃತಿ ಪಾದಯಾತ್ರೆ- ವ್ಯನಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತ ದುಶ್ಚಟ ಜೋಳಿಗೆ ನಾಡವರ ಗಮನ ಸೆಳೆದಿದೆ. ಸ್ವಸ್ಥಸಮಾಜ ನಿರ್ಮಣಕ್ಕೆ ಸಂಕಲ್ಪ ಬದ್ಧರಾಗಿದ್ದಾರೆ.

ವಿಷಯಗಳು

ಇನ್ನಷ್ಟು ಜಿಲ್ಲೆ ಸುದ್ದಿಗಳು

ಎಲ್ಲಾ ನೋಡಿ