ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು
ಜಿಲ್ಲೆ

ಸಾಯಿಪ್ರಿಯಾ ಕಾರ್ಖಾನೆ ಆರಂಭಿಸಲು ರೈತರ ಒತ್ತಾಯ

ಬರಹ: ಎಂ. ಎನ್. ನದಾಫ್1 ನಿಮಿಷ ಓದು
ಜಮಖಂಡಿ ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ರೈತರು ಸಭೆ ನಡೆಸಿ ಚರ್ಚಿಸಿ ತಹಶೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಬಂದೋಬಸ್ತ್ ಒದಗಿಸಲು ಮನವಿ

ಜಮಖಂಡಿ: ತಾಲೂಕಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಣಿಕೆಗೆ ತಕ್ಷಣ ಪರವಾನಗಿ ನೀಡಬೇಕು ಹಾಗೂ ರೈತರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ ಅನೀಲ ಬಡಿಗೇರ ಹಾಗೂ ಎಸ್ಪಿ ಅವರಿಗೆ ಪ್ರತ್ಯೆಕವಾಗಿ ರೈತರು ಮನವಿ ಸಲ್ಲಿಸಿದರು.

ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ರೈತರು ಸಭೆ ನಡೆಸಿ ಚರ್ಚಿಸಿದ ರೈತರು, ಕಬ್ಬು ಕಟಾವಿಗೆ ಬಂದಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ, ಈಗಾಗಲೇ ಬರಗಾಲದ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ, ಇಂತಹ ಸಂದರ್ಭದಲ್ಲಿ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಣೆ ಮಾಡಲು ವಿಳಂಬವಾದರೆ ಬೆಳೆ ನಾಶವಾಗುವ ಆತಂಕ ಎದುರಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದರು.

ಕಬ್ಬು ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು, ಇಗಾಗಲೇ ರೈತರು ಕಟಾವು ಮಾಡಿಕೊಂಡು ಕಾರ್ಖಾನೆ ಬಳಿ ನಿಲ್ಲಿಸಿದ್ದಾರೆ ಆದರೆ ಕಾರ್ಖಾನೆಯವರು ವಾಹಣಗಳನ್ನು ಒಳಗೆ ತೆಗೆದುಕೊಳ್ಳುತ್ತಿಲ್ಲ ಇದರಿಂದ ಟ್ರ್ಯಾಕ್ಟರಗಳಲ್ಲಿ ಕಬ್ಬು ಒಣಗಿ ಹೋಗುತ್ತಿದೆ ಎಂದರು.

ಬೆಳಗಾವಿಯಲ್ಲಿ ನಡೆದ ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದು, ಪ್ರತಿ ಟನ್‌ಗೆ ಮೊದಲ ಕಂತು 3500 ಹಾಗೂ ಹಂಗಾಮು ಅಂತ್ಯದ ನಂತರ ಎರಡನೇ ಕಂತು 100 ರೂ ಸೇರಿಸಿ ಪ್ರತಿ ಟನ್ ಗೆ 3600 ದರ ನಿಗದಿಪಡಿಸಲಾಗಿದೆ, ಈ ದರಕ್ಕೆ ಕಬ್ಬು ಬೆಳೆಗಾರರ ಸಂಪೂರ್ಣ ಒಪ್ಪಿಗೆ ಇದೆ ಎಂದರು.

ಕಬ್ಬು ಕಟಾವು ಗ್ಯಾಂಗ್ ಹಾಗೂ ಕಬ್ಬು ಸಾಗಿಸುವ ವಾಹನಗಳ ಮಾಲೀಕರಿಗೆ ಲಕ್ಷಾಂತರ ಮುಂಗಡ ಹಣವನ್ನು ನೀಡಲಾಗಿದೆ, ನಿಗದಿತ ಅವಧಿಯಲ್ಲಿ ಕಾರ್ಖಾನೆ ಪ್ರಾರಂಭವಾಗದಿದ್ದರೆ ಕಟಾವು ಗ್ಯಾಂಗ್ ಹಾಗೂ ವಾಹನ ಮಾಲಿಕರು ಬೇರೆ ಸ್ಥಳಗಳಿಗೆ ತೆರಳುವ ಸಾಧ್ಯತೆಯಿದೆ, ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವ ಆತಂಕವಿದೆ, ಮಳೆ ಅಭಾವದಿಂದ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಕಟಾವು ವಿಳಂಬವಾದರೆ ಕೃಷಿ ಚಟುವಟೆಕೆಗಳಿಗೆ ತೊಂದರೆಯಾಗುತ್ತದೆ ಎಂದರು.

ಮಾಜಿ ಜಿಪಂ ಸದಸ್ಯ ಪುಂಡಲೀಕ ಪಾಲಬಾಂವಿ, ಈಶ್ವರ ಕರಬಸನ್ನವರ, ಸೋಮನಾಥ ಪಾಟೀಲ, ಭೀಮಪ್ಪ ಹಿಪ್ಪರಗಿ, ಅಪ್ಪು ಚೌವ್ಹಾನ, ಸದಪ್ಪ ಹಿಪ್ಪರಗಿ, ಭೀಮಸಿ ಮಗದೂಮ, ಮಲ್ಲಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು.

ಇನ್ನಷ್ಟು ಜಿಲ್ಲೆ ಸುದ್ದಿಗಳು

ಎಲ್ಲಾ ನೋಡಿ