ಗಣಿಗಾರಿಕೆಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಮಾಡುವುದೆಂದರೆ ಸವಾಲುಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ರೈತನೊರ್ವ ಬಿಸಿಲು, ನೀರಿನ ಕೊರತೆ ಹಾಗೂ ಬರ ಪರಿಸ್ಥಿತಿಯ ನಡುವೆಯೂ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ವೀಳ್ಯದೆಲೆ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಬನ್ನಿ ನೋಡೋಣ ಈ ಸಾಧಕ ರೈತನ ಕುರಿತ ಒಂದು ವರದಿ. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಬಳ್ಳಾರಿ ಜಿಲ್ಲೆ ಸಂಡೂರಿನ ರೈತ K. ಬಸಪ್ಪ ಸಾಕ್ಷಿಯಾಗಿದ್ದಾರೆ. ಫಲವತ್ತಾದ ಭೂಮಿಗೆ ನೀರಿನ ಕೊರತೆ ಇದ್ದರೂ, ಸಮಸ್ಯೆಗಳಿಗೆ ಎದೆ ಗುಂದದೆ