ಬೆಲೆ ಏರಿಕೆಯಿಂದ ಸಾಮಾನ್ಯರ ಬದುಕು ದುಸ್ತರ; ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅಸಮಾಧಾನ
ಬರಹ: ಎಂ. ಎನ್. ನದಾಫ್1 ನಿಮಿಷ ಓದು

ಹಾಲು, ತುಪ್ಪ, ಬಸ್ ದರ ಸೇರಿದಂತೆ ಅಗತ್ಯ ವಸ್ತುಗಳ ದರಗಳನ್ನು ರಾಜ್ಯ ಸರ್ಕಾರ ಮನಸೋಇಚ್ಛೆ ಏರಿಕೆ ಮಾಡಿದ್ದು, ಇದರಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರು, ಬೆಲೆ ಏರಿಕೆ ಕುರಿತು ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ? ಎಂದು ಹೈಕೋರ್ಟ್ ಪ್ರಶ್ನಿಸಿದೆ ಎಂದು ಹೇಳಿದರು.
ಒಂದು ತಿಂಗಳ ಹಿಂದೆ ೬೫೦ ರೂಪಾಯಿ ಇದ್ದ ಕೆ.ಜಿ. ನಂದಿನ ತುಪ್ಪದ ಪ್ಯಾಕೆಟ್, ಈಗ ೮೫೦ ರೂಪಾಯಿಗೆ ಏರಿಕೆಯಾಗಿದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ದರಗಳನ್ನು ಸಹ ವಿಪರೀತ ಏರಿಸಲಾಗಿದೆ. ಒಂದು ಕಡೆ ಉಚಿತ ಗ್ಯಾರೆಂಟಿ ಎಂದು ತೋರಿಸಿ, ಮತ್ತೊಂದು ಕಡೆ ಹಾಲು, ತುಪ್ಪ, ಬಸ್ ದರಗಳ ಮೂಲಕ ಬಡವರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ದೂರಿದರು.
ಇನ್ನಷ್ಟು ಸುದ್ದಿಗಳು
ಕೇಂದ್ರ ಸಚಿವ ವಿ ಸೋಮಣ್ಣ ಲೋಕಭವನಕ್ಕೆ ಭೇಟಿ-ರಾಜ್ಯಪಾಲರಾದ ಡಾ ಸುಧಾ ಯಾದವ್ ಅವರೊಂದಿಗೆ ಚರ್ಚೆ
ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಿಂದ ನೆರವು-ಕೋಲಾರದ ಕುಂಬಾರ ಕುಟುಂಬಗಳಿಂದ ಸ್ವಾವಲಂಬಿ ಜೀವನ
ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಸಮ್ಮೇಳ-ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಮಾಹಿತಿ

ರಾಷ್ಟ್ರೀಯ ದತ್ತು ಮಾಸಾಚರಣೆ 2026-ಕೊಳ್ಳೇಗಾಲದಲ್ಲಿ ಅರಿವು ಕಾರ್ಯಕ್ರಮ
ಜಿಲ್ಲೆ
ಕೇಂದ್ರ ಸಚಿವ ವಿ ಸೋಮಣ್ಣ ಲೋಕಭವನಕ್ಕೆ ಭೇಟಿ-ರಾಜ್ಯಪಾಲರಾದ ಡಾ ಸುಧಾ ಯಾದವ್ ಅವರೊಂದಿಗೆ ಚರ್ಚೆ
ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಿಂದ ನೆರವು-ಕೋಲಾರದ ಕುಂಬಾರ ಕುಟುಂಬಗಳಿಂದ ಸ್ವಾವಲಂಬಿ ಜೀವನ

