ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು

ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಿಂದ ನೆರವು-ಕೋಲಾರದ ಕುಂಬಾರ ಕುಟುಂಬಗಳಿಂದ ಸ್ವಾವಲಂಬಿ ಜೀವನ

ಬರಹ: ಎಂ. ಎನ್. ನದಾಫ್1 ನಿಮಿಷ ಓದು

ಸಾಂಪ್ರದಾಯಿಕ ಕಸುಬುದಾರರು, ಕುಶಲಕರ್ಮಿಗಳಿಗೆ ಆರ್ಥಿಕ ನೆರವು, ತರಬೇತಿ ನೀಡಲು ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ-ವಿಶ್ವಕರ್ಮ ಯೋಜನೆಯ ಸೌಲಭ್ಯ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಹಲವು ಕುಂಬಾರ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುತ್ತಿವೆ. ಈ ಯೋಜಯಡಿಯಲ್ಲಿ ಮಣ್ಣಿನ ದೀಪಗಳನ್ನು ತಯಾರಿಸಿ, ದೀಪಾವಳಿ ಸಂದರ್ಭದಲ್ಲಿ ಉತ್ತಮ ಲಾಭ ಪಡೆಯುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ದೇಶದಾದ್ಯಂತ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಸಣ್ಣ ಕಸುಬುದಾರರ ಜೀವನ ಮಟ್ಟ ಉತ್ತಮಪಡಿಸಲು ಹಾಗೂ ಅವರ ಕೌಶಲ್ಯಕ್ಕೆ ಸೂಕ್ತ ವೇದಿಕೆ ಒದಗಿಸಲು ಜಾರಿಗೆ ತಂದಿರುವ ಕಾರ್ಯಕ್ರಮವೇ ವಿಶ್ವಕರ್ಮ ಯೋಜನೆ. ಕೋಲಾರ ಜಿಲ್ಲೆಯ ಕುಂಬಾರ ಕುಟುಂಬಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವೃತ್ತಿಯನ್ನು ಮುಂದುವರಿಸಿ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.

ನೂರಾರು ವರ್ಷಗಳಿಂದ ಬೆಳೆದು ಬಂದಿರುವ ದೇಶದ 18 ಸಾಂಪ್ರದಾಯಿಕ ಕುಶಲ ಕಲೆಗಳಾದ ಬಡಗಿ, ಕಮ್ಮಾರ, ಅಕ್ಕಸಾಲಿಗ, ಚಮ್ಮಾರ, ಕಂಬಾರ ವೃತ್ತಿಗಳು ಮರೆಯಾಗದಂತೆ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಲು ವಿಶ್ವಕರ್ಮ ಯೋಜನೆ ನೆರವಾಗುತ್ತಿದೆ.

ವಿಶ್ವಕರ್ಮ ಯೋಜನೆಯ ಫಲಾನುಭವಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿರುವ ಮೇಡರಹಳ್ಳಿಯ ಮುನಿರಾಜು ಸುಮಾರು 22 ಜನರಿಗೆ ಕುಂಬಾರಿಕೆ ತರಬೇತಿಯನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ದೂರದರ್ಶನದೊಂದಿಗೆ ಫಲಾನುಭಿ ಮುನಿರಾಜು, ಈ ಯೋಜನೆಯಿಂದ ಕುಂಬಾರಿಕೆ ಮಾಡುವ ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುವಂತಾಗಿದೆ ಎಂದು ವಿವರಿಸಿದರು.

ಕುಂಬಾರಪೇಟೆಯ ಫಲಾನುಭವಿ ಶ್ರೀನಿವಾಸ್, ಪಿಎಂ-ವಿಶ್ವಕರ್ಮ ಯೋಜನೆಯಿಂದ ತರಬೇತಿ ನೀಡುವ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯವು ಸಿಕ್ಕಿದೆ. ಇದರಿಂದ ವ್ಯಾಪಾರ ವೃದ್ಧಿಯಾಗಿದೆ ಎಂದು ಹೇಳಿದರು.

ಮತ್ತೊರ್ವ ಮಹಿಳೆ ಗಾಯತ್ರಿ, ಕುಂಬಾರಿಕೆ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದೇವೆ. ಕಷ್ಟಪಟ್ಟು ಮಣ್ಣಿನಿಂದ ತಯಾರಿಸಿದ ಉತ್ಪನ್ನಗಳಿಗೆ ಬೆಲೆ ಸಿಗುವಂತಾಗಬೇಕು ಎಂದರು.

ಗ್ರಾಹಕ ನಾಗರಾಜ್, ಪ್ಲಾಸ್ಟಿಕ್, ಪಿಂಗಾಣಿ ಸೇರಿದಂತೆ ಇತರೆ ದೀಪಗಳಿಗೆ ಹೋಲಿಸಿಕೊಂಡರೆ ಬಹಳ ಹಗ್ಗದ ರೀತಿಯಲ್ಲಿ ಮಣ್ಣಿನ ದೀಪಗಳು ಸಿಗುತ್ತಿವೆ ಎಂದು ಹೇಳಿದರು.

ಮತ್ತೊರ್ವ ಗ್ರಾಹಕರಾದ ಪದ್ಮಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು ದೀಪಗಳನ್ನು ಹಚ್ಚುವ ಮೂಲಕ ನಮ್ಮ ಪರಂಪರೆಯನ್ನು ಉಳಿಸುವುದರ ಜೊತೆಗೆ ಕುಂಬಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.

ಸ್ಥಳೀಯರಾದ ಪಾ.ಶ್ರೀ ಅನಂತರಾಮ್, ಮಣ್ಣಿನ ಉತ್ಪನ್ನಗಳ ಬಳಕೆ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಚಾರ ಸಿಗಬೇಕು ಹಾಗೂ ಸರ್ಕಾರದಿಂದಲೂ ಉತ್ತೇಜನ ಸಿಗಬೇಕು ಎಂದು ಹೇಳಿದರು.

ಒಟ್ಟಾರೆಯಾಗಿ ಬೆಳಕಿನ ಹಬ್ಬ ದೀಪಾವಳಿಗೆ ಗ್ರಾಹಕರು ಮಣ್ಣಿನ ದೀಪಗಳನ್ನು ಖರೀದಿಸುವ ಮೂಲಕ ಕಂಬಾರರ ವೃತ್ತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ನೆರವಾಗುತ್ತಿರುವ ಶ್ಲಾಘನೀಯವಾಗಿದೆ.

ಇನ್ನಷ್ಟು ಸುದ್ದಿಗಳು